ಆಹಾರ ಅರಸಿ ಬಂದ ಬೃಹತ್ ಮೊಸಳೆ ಸೆರೆ ಹಿಡಿದ ಗ್ರಾಮಸ್ಥರು - ವಿಡಿಯೋ - ರಾಯಚೂರಲ್ಲಿ ಮೊಸಳೆ ಸೆರೆ
ರಾಯಚೂರು : ಭಾರೀ ಮಳೆಯಾದ ಹಿನ್ನೆಲೆ ಆಹಾರ ಅರಸಿ ತೋಟವೊಂದಕ್ಕೆ ಬಂದಿದ್ದ ಮೊಸಳೆಯನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಫೂಲಬಾವಿ ಗ್ರಾಮದ ಎನ್ ಬಿ ಹೂಗಾರ ಎಂಬುವರ ತೋಟದಲ್ಲಿ ಬೃಹತ್ ಗಾತ್ರದ ಮೊಸಳೆ ಕಂಡು ಬಂದಿತ್ತು. ಇದನ್ನು ಕಂಡ ತೋಟದ ಮಾಲೀಕ ಗಾಬರಿಗೊಂಡು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದರು. ಬಳಿಕ ಎಚ್ಚರಿಕೆಯಿಂದ ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.