ಜವಾಬ್ದಾರಿ ಮರೆತು ತಿರುಗುತ್ತಿದ್ದವರಿಗೆ ಲಾಠಿ ಏಟು ನೀಡಿದ ಓಬವ್ವ ಪಡೆ - ಕೊರೊನಾ ರೋಗ
ವಿಜಯಪುರ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ರೆ ಕೆಲವರು ಬೇಜವಾಬ್ದಾರಿಯಿಂದ ರಸ್ತೆಯಲ್ಲಿ ನಿರ್ಭಯವಾಗಿ ತಿರುಗಾಡುತ್ತಿದ್ದಾರೆ. ಅಂತವರಿಗೆ ನಗರದಲ್ಲಿ ಓಬವ್ವ ಪಡೆಯ ಸಿಬ್ಬಂದಿ ಲಾಠಿ ಏಟು ನೀಡಿ ಮನೆಗೆ ಕಳುಹಿಸಿದ್ದಾರೆ. ಕೊರೊನಾ ಸೋಂಕು ತಡೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವಹಿಸಿ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಿದೆ. ಮನೆಯಿಂದ ಹೊರಗೆ ಬರಬೇಡಿ ಎಂದು ಜನರಿಗೆ ಎಚ್ಚರಿಕೆ ನೀಡಲಾಗಿದೆ. ಈ ಆದೇಶ ಧಿಕ್ಕರಿಸಿದವರಿಗೆ ಓಬಬ್ಬ ಪಡೆ ಲಾಠಿ ರುಚಿ ತೋರಿಸಿದೆ.
Last Updated : Mar 26, 2020, 5:27 PM IST