ಕಲಬುರಗಿಯಲ್ಲಿ ಸಂಭ್ರಮದ ವಿಜಯದಶಮಿ ಆಚರಣೆ: ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ - ಕಲಬುರಗಿ ಆರಾಧ್ಯದೈವ ಶರಣಬಸವೇಶ್ವರ
ಕಲಬುರಗಿ: ಜಿಲ್ಲೆಯಾದ್ಯಂತ ವಿಜಯ ದಶಮಿ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ಇಲ್ಲಿನ ಶರಣಬಸವೇಶ್ವರರ ದರ್ಶನ ಪಡೆದ ಭಕ್ತರು ಇಷ್ಟಾರ್ಥಸಿದ್ಧಿಗೆ ಪ್ರಾರ್ಥಿಸಿದರು. ಇದೇ ವೇಳೆ ಬನ್ನಿ ನೀಡುವ ಮೂಲಕ ಭಕ್ತರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.