ಯೋಗೇಶ್ ಗೌಡ ಹತ್ಯೆ ಪ್ರಕರಣ ; ವಿಚಾರಣೆ ಮುಗಿಸಿ ಹೊರಬಂದ ವಿಜಯ್ ಕುಲಕರ್ಣಿ, ಚಂದ್ರಶೇಖರ ಇಂಡಿ - ಸಿಬಿಐ ಅಧಿಕಾರಿಗಳ ವಿಚಾರಣೆ ಎದುರಿಸಿದ ವಿನಯ್ ಸಹೋದರ ವಿಜಯ್ ಕುಲಕರ್ಣಿ
ಜಿಪಂ ಸದಸ್ಯ ಯೋಗೇಶ್ ಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳ ವಿಚಾರಣೆ ಎದುರಿಸಿ ವಿನಯ್ ಸಹೋದರ ವಿಜಯ್ ಕುಲಕರ್ಣಿ ಹಾಗೂ ಅವರ ಸೋದರ ಮಾವ ಚಂದ್ರಶೇಖರ ಇಂಡಿ ಹೊರ ಬಂದಿದ್ದಾರೆ. ಎರಡೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ. ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆದಿತ್ತು. ಈ ಸಂದರ್ಭ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ವಿಜಯ ಕುಲಕರ್ಣಿ ಹಿಂದೇಟು ಹಾಕಿದ್ದಾರೆ. ಮಾತನಾಡಿಸಲು ಯತ್ನಿಸಿದ ಮಾಧ್ಯಮದವರಿಗೆ ಕೋರ್ಟ್ನಲ್ಲಿ ಮ್ಯಾಟರ್ ಇದೆ, ವಿಚಾರಣೆ ಮುಗಿದಿಲ್ಲ. ಸಿಬಿಐನವರು ಯಾವಾಗ ಕರೆಯುತ್ತಾರೋ ಆವಾಗ ಬರುತ್ತೇವೆ ಎಂದು ಹೇಳಿದ್ದಾರೆ.
Last Updated : Nov 22, 2020, 4:28 PM IST