ಯಾದಗಿರಿ: ಇಂದಿನಿಂದ ವಿದ್ಯಾಗಮ ತರಗತಿ ಆರಂಭ - ಯಾದಗಿರಿ ವಿದ್ಯಾಗಮ ಸುದ್ದಿ
ಯಾದಗಿರಿ: ಶಾಲಾ ಕಾಲೇಜುಗಳನ್ನ ಇಂದಿನಿಂದ ಪುನಾರಂಭ ಮಾಡಲು ಸರ್ಕಾರ ಆದೇಶ ನೀಡಿದೆ. ಇನ್ನು ಜಿಲ್ಲೆಯಾದ್ಯಂತ ವಿದ್ಯಾಗಮ ತರಬೇತಿಗಳು ಆರಂಭಗೊಂಡಿವೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಒಂಬತ್ತು ತಿಂಗಳಿಂದ ಬಂದ್ ಆಗಿದ್ದ ಶಾಲಾ ಕಾಲೇಜುಗಳು ಇಂದಿನಿಂದ ತೆರೆದಿದೆ. 10ನೇ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗಿದೆ. ಕಳೆದ ತಿಂಗಳಷ್ಟೇ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣದಿಂದ ಸ್ಥಗಿತಗೊಂಡಿದ್ದ ವಿದ್ಯಾಗಮ ತರಬೇತಿ ಇಂದಿನಿಂದ ಪುನಾರಂಭಗೊಂಡಿದೆ. ಯಾದಗಿರಿ ನಗರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳು ಆಗಮಿಸಿ ವಿದ್ಯಾಗಮ ತರಬೇತಿಗೆ ಹಾಜರಾಗಿದ್ದಾರೆ. ಈ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಅಳವಡಿಕೆ, ಸ್ಯಾನಿಟೈಸರ್ ಬಳಕೆ ಮಾಡಲಾಗಿದೆ.