ವಿಮಾನ ನಿಲ್ದಾಣ ಅನುದಾನದಲ್ಲಿ ಶಿವಮೊಗ್ಗಕ್ಕೆ ಬೆಣ್ಣೆ, ವಿಜಯಪುರಕ್ಕೆ ಸುಣ್ಣ : ಯತ್ನಾಳ್ - Vidhana sabha questioning session
ಬೆಂಗಳೂರು: ವಿಧಾನ ಸಭೆ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿಮಾನ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಬಜೆಟ್ನಲ್ಲಿ ವಿಜಯಪುರ ಜಿಲ್ಲೆಗೆ ಮಾಡಿರುವ ಅನ್ಯಾಯದ ವಿರುದ್ಧ ಮಾತನಾಡಿದ್ದಾರೆ. ಸರ್ಕಾರ ವಿಮಾನ ನಿಲ್ದಾಣ ಯೋಜನೆಗೆ ವಿಜಯಪುರ ಜಿಲ್ಲೆಗೆ 220 ಕೋಟಿ ನೀಡಿದ್ದು, ಅದೇ ಶಿವಮೊಗ್ಗಕ್ಕೆ 384 ಕೋಟಿ ರೂ. ಅನುದಾನ ನೀಡುವ ಮೂಲಕ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಬಳಿಯುವ ಕೆಲಸ ಮಾಡಿದೆ ಎಂದಿದ್ದಾರೆ.