ಉಗ್ರ ಸ್ವರೂಪಕ್ಕೆ ತಿರುಗಿದ ವೈದ್ಯರ ಪ್ರತಿಭಟನೆ: ಸಂಪೂರ್ಣ ಒಪಿಡಿ ಸೇವೆ ಬಂದ್! ರೋಗಿಗಳ ಪರದಾಟ - ವೈದ್ಯಕೀಯ ಶಿಕ್ಷಣ ಸಚಿವ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಮಾಡುತ್ತಿರುವ ಪ್ರತಿಭಟನೆ ಮೂರನೆ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ಕೈಬಿಡುವಂತೆ ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದರೂ ಬಗ್ಗದ ವೈದ್ಯರು, ಬೇಡಿಕೆ ಈಡೇರುವ ತನಕ ಪ್ರತಿಭಟನೆ ಕೈ ಬಿಡದಿರಲು ತೀರ್ಮಾನ ಮಾಡಿದ್ದಾರೆ. ನಿನ್ನೆ ಮಿಂಟೋ ಆವರಣದಲ್ಲಿ ಇದ್ದ ಪ್ರತಿಭಟನೆ, ಈಗ ವಿಕ್ಟೋರಿಯಾ ಆಸ್ಪತ್ರೆ ಆವರಣಕ್ಕೆ ಶಿಫ್ಟ್ ಆಗಿದೆ. ಇಂದು ಕೂಡ ಒಪಿಡಿ ಸೇವೆ ಸಂಪೂರ್ಣ ಬಂದ್ ಆಗಲಿದ್ದು, ರೋಗಿಗಳು ಪರದಾಡಬೇಕಿದೆ.