ಕರ್ನಾಟಕ

karnataka

ETV Bharat / videos

ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡರ ಕೊನೆ ಭಾಷಣ:ವಿಡಿಯೋ - ಎಸ್.ಎಲ್.ಧರ್ಮೇಗೌಡ ಅವರ ಕೊನೆಯ ಭಾಷಣ

By

Published : Dec 30, 2020, 5:54 PM IST

Updated : Dec 30, 2020, 7:34 PM IST

ವಿಧಾನ ಪರಿಷತ್​ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡ ಹಿಂದಿನ ದಿನ ಚಿಕ್ಕಮಗಳೂರಿನಲ್ಲಿ ಮೂರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಕಾರ್ಯ ಕ್ರಮಗಳಿಗೆ ಭಾಗವಹಿಸುವ ಮುನ್ನ ಸರಪನಹಳ್ಳಿಯಲ್ಲಿರುವ ಅವರ ತೋಟದಲ್ಲಿ ಅವರ ಕುಟುಂಬ ಸದಸ್ಯರ ಜೊತೆ ನೂತನ ಮನೆ ಕಟ್ಟಲು ಗುದ್ದಲಿ ಪೂಜೆ ನೆರವೇರಿಸಿದ್ದರು. ಶತಮಾನೋತ್ಸವ ಕ್ರೀಡಾಂಗಣದಲ್ಲಿ ಮಲ್ಟಿ ಜಿಮ್ ಉದ್ಘಾಟನೆ ಮಾಡಿ, ನಂತರ ಕೆಎಸ್​ಆರ್​​​​ಟಿ​ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪಶು ಆಸ್ಪತ್ರೆ ಆವರಣದಲ್ಲಿ ಪಾಲಿ ಕ್ಲಿನಿಕ್ ಸ್ಥಾಪನೆಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಬಳಿಕ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕುವೆಂಪು ಕಲಾ ಮಂದಿರದಲ್ಲಿ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದ್ದರು. ಈ ವೇಳೆ, ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೊನೆಯ ಭಾಷಣ ಹೀಗಿದೆ.
Last Updated : Dec 30, 2020, 7:34 PM IST

ABOUT THE AUTHOR

...view details