ಕ್ಲೀನ್ ಚೀಟ್ ಪಡೆದ ಅಡ್ವಾಣಿ-ಜೋಶಿ ಸೇರಿದಂತೆ 32 ಜನ ಪೂಜೆಗೆ ಅರ್ಹರು: ವಿಹೆಚ್ಪಿ ಮುಖಂಡ ಕೃಷ್ಣಭಟ್ - ಉತ್ತರ ಕರ್ನಾಟಕದ ಕೋಶಾಧ್ಯಕ್ಷ ಕೃಷ್ಣಭಟ್
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕ್ಲೀನ್ ಚೀಟ್ ಪಡೆದ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿದಂತೆ ಎಲ್ಲ 32 ಜನರೂ ಪೂಜೆಗೆ ಅರ್ಹರು ವಿಶ್ವ ಹಿಂದೂ ಪರಿಷತ್ತಿನ ಉತ್ತರ ಕರ್ನಾಟಕದ ಕೋಶಾಧ್ಯಕ್ಷ ಕೃಷ್ಣಭಟ್ ಹೇಳಿದರು. ಪ್ರಕರಣ ಸಂಬಂಧ ಸಿಬಿಐ ಕೋರ್ಟ್ ನೀಡಿದ ಅಂತಿಮ ತೀರ್ಪು ಹಿಂದೂಗಳ ಪಾಲಿಗೆ ಐತಿಹಾಸಿಕವಾಗಿದೆ ಎಂದರು.