ಉಪಮುಖ್ಯಮಂತ್ರಿ ಸವದಿ ಕ್ಷೇತ್ರದಲ್ಲೇ ಇನ್ನೂ ತೆರೆಯದ ಪಶು ಮಹಾವಿದ್ಯಾಲಯದ ಬಾಗಿಲು - ಸರ್ಕಾರಿ ಪಶುವೈದ್ಯಕೀಯ ಮಹಾವಿದ್ಯಾಲಯ
ಕಳೆದ ವರ್ಷ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಉದ್ಘಾಟಿಸಿದ್ದ ಸರ್ಕಾರಿ ಪಶುವೈದ್ಯಕೀಯ ಮಹಾವಿದ್ಯಾಲಯ ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ ಎನ್ನುವ ಫಲಕ ಸೂಚಿಸುತ್ತಿದೆ. ವರ್ಷಗಳೇ ಗತಿಸಿದರೂ ಈ ಕಾಮಗಾರಿ ಮುಗಿಯೋದು ಯಾವಾಗ ಎಂಬ ಪ್ರಶ್ನೆ ಈ ಭಾಗದ ಜನರದ್ದಾಗಿದೆ.