ಹಿರಿಯ ನಾಗರಿಕರು, ಆರೋಗ್ಯ ಕಾರ್ಯಕರ್ತರ ನಡುವೆ ವಾಕ್ಸಮರ - ಕೆ.ಸಿ.ಜನರಲ್ ಆಸ್ಪತ್ರೆ
ಬೆಂಗಳೂರು : ಮೂರನೇ ಹಂತದಲ್ಲಿ ವ್ಯಾಕ್ಸಿನ್ ಪಡೆಯಬೇಕೆಂದು ಆಸಕ್ತಿಯಿಂದ ಬಂದ ಹಿರಿಯ ನಾಗರಿಕರಿಗೆ ನಿರಾಸೆಯಾಗಿದೆ. ಆನ್ಲೈನ್ ಪೋರ್ಟಲ್ನಲ್ಲೂ ನೋಂದಣಿಯಾಗುತ್ತಿಲ್ಲ. ಇತ್ತ ಕೆ ಸಿ ಜನರಲ್ ಆರೋಗ್ಯಾಧಿಕಾರಿಗಳು ರಿಸಜಿಸ್ಟರ್ ಮಾಡಿಕೊಂಡು ಬಂದರೆ ಮಾತ್ರ ವ್ಯಾಕ್ಸಿನ್ ಎನ್ನುತ್ತಿದ್ದಾರೆ. ನಾವೇನು ಮಾಡ್ಬೇಕು ಎಂದು ಹಿರಿಯ ನಾಗರಿಕರು ಪ್ರಶ್ನಿಸುತ್ತಿದ್ದಾರೆ. 12 ಗಂಟೆಯವರೆಗೆ ಕಾಯಬೇಕು. ಇವತ್ತು ಸಾಧ್ಯವಾಗದಿದ್ದರೆ, ಎರಡ್ಮೂರು ದಿನ ಬಿಟ್ಟು ಬನ್ನಿ ಎಂದು ಆರೋಗ್ಯಾಧಿಕಾರಿಗಳು ತಿಳಿಸುತ್ತಿದ್ದಾರೆ. ಆದರೆ, ಬೆಳಗ್ಗೆಯಿಂದಲೇ ಕಾದು ಕುಳಿತಿರುವ ಹಿರಿಯ ನಾಗರಿಕರು, ವ್ಯಾಕ್ಸಿನ್ ಪಡೆದೇ ಇಲ್ಲಿಂದ ಹೋಗೋದು. ಅಲ್ಲಿವರೆಗೂ ಮನೆಗೆ ಹೋಗೋದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.