ಅವನಿ ಸೀತಾರಾಮ ಕಲ್ಯಾಣಕ್ಕೆ ಆಗಮಿಸುವಂತೆ ಸಿಎಂಗೆ ಆಹ್ವಾನ..! - Venkateshwara veda vishwa university Invited to C M BSY For sitarama kalyana
ಬೆಂಗಳೂರು: ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಅವನಿಯಲ್ಲಿ ನಡೆಯಲಿರುವ ಸೀತಾರಾಮ ಕಲ್ಯಾಣ ಮತ್ತು ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಿಎಂ ಯಡಿಯೂರಪ್ಪನವರಿಗೆ ಆಹ್ವಾನ ನೀಡಲಾಯಿತು. ತಿರುಪತಿ ವೆಂಕಟೇಶ್ವರ ವೇದ ವಿಶ್ವವಿದ್ಯಾಲಯದ ವೈಕಾನಸ ಆಗಮ ಆಚಾರ್ಯ, ಪರಾಶರಂ ಬಾಲಾಜಿ ದೇವಾಲಯದ ಪ್ರಧಾನ ಅರ್ಚಕ, ಉತ್ತರ ಪ್ರದೇಶ ರಾಜ್ಯದ ಭಾವ ನಾರಾಯಣ ಆಚಾರ್ಯ ಇವರೆಲ್ಲರೂ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿ ಯಡಿಯೂರಪ್ಪನವರಿಗೆ ಅಧಿಕೃತವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.