ಸುಪ್ರೀಂಕೋರ್ಟ್ ತೀರ್ಪಿನಿಂದ ಎರಡೂ ಧರ್ಮಗಳಿಗೆ ನ್ಯಾಯ ಸಿಕ್ಕಿದೆ: ವೀರೇಂದ್ರ ಹೆಗ್ಗಡೆ - ಅಯೋಧ್ಯೆ ತೀರ್ಪು ಕುರಿತು ವೀರೇಂದ್ರ ಹೆಗ್ಗಡೆ ಹೇಳಿಕೆ
ಅಯೋಧ್ಯೆ ಕುರಿತ ಸುಪ್ರೀಂಕೋರ್ಟ್ನ ತೀರ್ಪಿನ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಎರಡೂ ಧರ್ಮಗಳಿಗೆ ನ್ಯಾಯ ಸಿಕ್ಕಿದೆ. ನಾವೆಲ್ಲರೂ ಹಾಲು ನೀರಿನಂತೆ ಬದುಕುತ್ತಿದ್ದೇವೆ. ಮುಂದೆಯು ಹಾಗೇ ಬಾಳಬೇಕು ಎಂದಿದ್ದಾರೆ. ಇತ್ತ ಸಂಸದ ಬಿ.ವೈ.ರಾಘವೇಂದ್ರ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಸುಪ್ರೀಂ ತೀರ್ಪನ್ನ ಸ್ವಾಗತಿಸಿದ್ದಾರೆ.
Last Updated : Nov 9, 2019, 8:37 PM IST