ಚೀನಾ ಮಾತುಕತೆಗೆ ಒಪ್ಪದಿದ್ದರೆ ಯುದ್ಧ ನಿಶ್ಚಿತ: ನಿವೃತ್ತ ಯೋಧ ವೀರಪ್ಪ ಬಿಂಗಿ - ಗದಗದ ನಿವೃತ್ತ ಯೋಧ ವೀರಪ್ಪ ಬಿಂಗಿ
ಗದಗ: ಭಾರತ ಮತ್ತು ಚೀನಾ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಚೀನಾ ಒಪ್ಪದಿದ್ದರೆ ಯುದ್ಧ ನಿಶ್ಚಿತ ಎಂದು ನಿವೃತ್ತ ಯೋಧ ವೀರಪ್ಪ ಬಿಂಗಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಯುದ್ಧ ನಡೆದರೆ ಎರಡು ದೇಶಗಳಿಗೂ ಸಾಕಷ್ಟು ಹಾನಿಯಾಗುತ್ತದೆ. ಹೀಗಾಗಿ ಮಾತುಕತೆಯ ಮುಖಾಂತರ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ ಎಂದಿದ್ದಾರೆ.