ಸಸಿ ನೆಡುವ ಆಂದೋಲನಕ್ಕೆ ಚಾಲನೆ ನೀಡಿದ ಸಾಲುಮರದ ವೀರಾಚಾರಿ - veerachari latest news
ಗಂಗಾವತಿ : ಪ್ರಕೃತಿಯಲ್ಲಿ ಸದಾ ಹಸಿರು ನಳ ನಳಿಸುತ್ತಿದ್ದರೆ ಮಾತ್ರ ಮನುಷ್ಯನ ಅಸ್ತಿತ್ವ ಸಾಧ್ಯ. ಇಲ್ಲವಾದಲ್ಲಿ ಮನುಷ್ಯ ಸೇರಿ ಭೂಮಿಯ ಮೇಲಿನ ಸಕಲ ಜೀವ ಸಂಕುಲ ನಾಶವಾಗುತ್ತವೆ ಎಂದು ಪರಿಸರ ಪ್ರೇಮಿ, ಸಾಲುಮರದ ವೀರಾಚಾರಿ ಅವರು ಹೇಳಿದರು. ಇಲ್ಲಿನ ಚಾರಣ ಬಳಗ, ಪರಿಸರ ಟಿವಿ, ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ಢಣಾಪುರ ತಂಡ, ಕೆನರಾ ಬ್ಯಾಂಕ್ ಮತ್ತಿತರ ಸಂಘ-ಸಂಸ್ಥೆಗಳು ನಗರದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಅಂಗವಾಗಿ ಸಸಿ ನೆಡುವ ಆಂದೋಲನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ಮನುಷ್ಯನಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕಾದರೆ ಪ್ರಕೃತಿಯಲ್ಲಿ ಹಸಿರು ಹೆಚ್ಚಾಗಬೇಕು ಎಂದರು.