ಅದ್ಧೂರಿಯಾಗಿ ನೆರವೇರಿದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ - Veerabhadreshwara Fair
ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಅಫಜಲಪುರ ತಾಲೂಕಿನ ಚಿನಮಗೇರಾ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ವರ್ಷಕ್ಕೆ ಎರಡು ಬಾರಿ ಈ ಜಾತ್ರಾ ಮಹೋತ್ಸವ ಜರುಗಲಿದ್ದು, ಒಂದು ಬಾರಿ ರಥೋತ್ಸವ ನಡೆದರೆ ಆರು ತಿಂಗಳ ಅಂತರದಲ್ಲಿ ಕೆಂಡ ಹಾಯುವ ಜಾತ್ರಾ ಮಹೋತ್ಸವ ನಡೆಯುತ್ತದೆ. ತಡರಾತ್ರಿ ಕೆಂಡ ತುಳಿಯುವ ಮೂಲಕ ದೇವರಿಗೆ ಭಕ್ತರು ಭಕ್ತಿ ಸಮರ್ಪಿಸಿದರು. ಜಾತ್ರೆಯ ಅಂಗವಾಗಿ ಇಡೀ ದಿನ ವೀರಭದ್ರ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬಳಿಕ ಮಧ್ಯರಾತ್ರಿ ಒಂದು ಗಂಟೆಗೆ ದೇವಸ್ಥಾನ ಆವರಣದಲ್ಲಿ ಕೆಂಡ ತುಳಿಯಲಾಯಿತು. ಮೋದಲಿಗೆ ಪಲ್ಲಕ್ಕಿ ಹಾಗೂ ಪುರವಂತರು ಅಗ್ನಿ ಪ್ರವೇಶ ಮಾಡಿದರು. ಜಾತ್ರೆಗೆ ರಾಜ್ಯವಲ್ಲದೆ ದೇಶದ ಇತರೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು.