ಕರ್ನಾಟಕ

karnataka

ETV Bharat / videos

ಶಿರಸಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ - Valmiki Jayanti celebration in Shirasi

By

Published : Oct 13, 2019, 6:58 PM IST

ಶಿರಸಿ: ಮಹರ್ಷಿ ವಾಲ್ಮೀಕಿ ವೇಷಧಾರಿ, ರಾಮ, ಲಕ್ಷ್ಮಣ ಹಾಗೂ ಸೀತೆಯ ಅವತಾರಗಳನ್ನು ಜನರಿಗೆ ತೋರಿಸುವ ಮೂಲಕ ಮೆರವಣಿಗೆ ನಡೆಸಿ ವಾಲ್ಮೀಕಿ ಜಯಂತಿಯನ್ನು ಜಿಲ್ಲೆಯ ಶಿರಸಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.‌ ವಾಲ್ಮೀಕಿ ಜಯಂತಿಯ ಅಂಗವಾಗಿ ಶಿರಸಿ ನಗರದ ವಿವಿಧ ವೃತ್ತ, ಬೀದಿಗಳಲ್ಲಿ ವೇಷಧಾರಿಗಳನ್ನು ಹಾಗೂ ಮಹರ್ಷಿಯ ರೂಪಕಗಳ ಮೆರವಣಿಗೆ ನಡೆಸಿದರು. ಸಮಾಜದ ಪ್ರಮುಖರು, ಅಧಿಕಾರಿಗಳು ಮೆರವಣಿಗೆಯೊಂದಿಗೆ ಹೆಜ್ಜೆ ಹಾಕಿದರು. ತಾಲೂಕು ಆಡಳಿತ, ತಾಲೂಕು ಪಂಚಾಯತಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಯಂತಿ ಹಮ್ಮಿಕೊಳ್ಳಲಾಗಿತ್ತು.

ABOUT THE AUTHOR

...view details