ನೆರೆಪೀಡಿತರ ಸಂಕಷ್ಟಕ್ಕೆ ಮಿಡಿದ ಮನ... ಕ್ವಿಂಟಲ್ಗಟ್ಟಲೇ ಪಲಾವ್ ರವಾನಿಸಿದ ವಕ್ಕನದುರ್ಗಾ ಗ್ರಾಮಸ್ಥರು
ಕೊಪ್ಪಳ: ಕುಷ್ಟಗಿ ತಾಲೂಕಿನ ವಕ್ಕನದುರ್ಗಾ ಗ್ರಾಮಸ್ಥರು ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಆಹಾರ ಸಿದ್ಧಪಡಿಸಿ ಕಳುಹಿಸುತ್ತಿದ್ದಾರೆ. ಮನೆ ಮನೆಗೆ ತೆರಳಿ ರೊಟ್ಟಿ ಸೇರಿದಂತೆ ಇನ್ನಿತರ ಆಹಾರ ಪದಾರ್ಥ ಸಂಗ್ರಹಿಸಿದ್ದು, ಸುಮಾರು ಮೂರೂವರೆ ಕ್ವಿಂಟಲ್ ಅಕ್ಕಿ ಬಳಸಿ ಪಲಾವ್ ತಯಾರಿಸಿದ್ದಾರೆ. ರೊಟ್ಟಿ, ಉಂಡೆ ಸೇರಿದಂತೆ ಪಲಾವ್ ಅನ್ನು ನೆರೆಪೀಡಿತ ಬಾಗಲಕೋಟೆಯ ಬಾದಾಮಿ ತಾಲೂಕಿನ ಕಾಟಾಪುರ ಹಾಗೂ ಗೋನಾಳ ಗ್ರಾಮದ ನೆರೆ ಸಂತ್ರಸ್ತರಿಗೆ ವಿತರಿಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
Last Updated : Aug 10, 2019, 7:25 PM IST