ಶಿವಮೊಗ್ಗದಲ್ಲಿ ವೈಕುಂಠ ಏಕಾದಶಿ ಸಂಭ್ರಮ - Vaikuntha Ekadashi in Shimoga
ಶಿವಮೊಗ್ಗ: ಜಿಲ್ಲೆಯಾದ್ಯಂತ ವೈಕುಂಠ ಏಕಾದಶಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿರುವ ವೆಂಕಟೇಶ್ವರ ದೇವಾಲಯಗಳಲ್ಲಿ ಇಂದು ಬೆಳಗ್ಗೆಯಿಂದಲೇ ವಿಶೇಷ ಪೊಜೆ-ಪುನಸ್ಕಾರಗಳು ನೆರವೇರುತ್ತಿವೆ. ಏಕಾದಶಿಯಂದು ವೆಂಕಟೇಶ್ವರನ ದರ್ಶನ ಪಡೆದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿಂದ ಭಕ್ತರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವೆಂಕಟೇಶ್ವರನನ್ನು ಹೂವುಗಳಿಂದ ಅಲಂಕರಿಸಿ ತೂಗೂಯ್ಯಾಲೆ ಮೇಲೆ ಕೂರಿಸಿ ಪೂಜಿಸಲಾಯಿತು. ಈ ಸಂಭ್ರಮವನ್ನು ಭಕ್ತರು ಕಣ್ತುಂಬಿಕೊಂಡರು.
Last Updated : Jan 6, 2020, 9:10 PM IST