ರಾಮನಗರದಲ್ಲಿ ವೈಕುಂಠ ಏಕಾದಶಿ ಸಂಭ್ರಮ... ದೇವಸ್ಥಾನಗಳಿಗೆ ಭಕ್ತರ ದಂಡು - ರಾಮನಗರದಲ್ಲಿ ವೈಕುಂಠ ಏಕಾದಶಿ ಸಂಭ್ರಮ
ರಾಮನಗರ: ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ದೇವಾಲಯಗಳಲ್ಲಿ ಸಂಭ್ರಮ ಮನೆ ಮಾಡಿದ್ದು, ಭಕ್ತರ ದಂಡು ಹರಿದು ಬರುತ್ತಿದೆ. ರೇಷ್ಮೆ ನಗರಿ ರಾಮನಗರದ ಕೆಂಪೇಗೌಡ ಸರ್ಕಲ್ನಲ್ಲಿರುವ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ಸಂಭ್ರಮ ಕಳೆಕಟ್ಟಿತ್ತು. ದೇವರ ದರ್ಶನ ಪಡೆಯಲು ಬೆಳಿಗ್ಗೆಯಿಂದ ಭಕ್ತಸಾಗರ ಹರಿದು ಬರುತ್ತಿದೆ. ಇಂದು ವಿಶೇಷವಾಗಿ ದೇವರ ದರ್ಶನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಗಲಿದೆ ಎಂಬ ನಂಬಿಕೆ ಇದೆ. ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗ್ಗೆ 4.30ರಿಂದಲೇ ಪೂಜೆ ಆರಂಭವಾಗಿದೆ. ದೇವಾಲಯದ ಪಕ್ಕದಲ್ಲೇ ಭಕ್ತರಿಗೆ ವೈಕುಂಠ ದ್ವಾರ ಪ್ರವೇಶದ ವ್ಯವಸ್ಥೆ ಮಾಡಲಾಗಿದೆ.