ಕರ್ನಾಟಕ

karnataka

ETV Bharat / videos

ಸಾಂಸ್ಕೃತಿಕ ನಗರಿಯಲ್ಲಿ ಸರಳ ವೈಕುಂಠ ಏಕಾದಶಿ ಸಂಭ್ರಮ - ಮೈಸೂರು ಸುದ್ದಿ

By

Published : Dec 25, 2020, 12:23 PM IST

ಮೈಸೂರು: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ವಿವಿಧ ದೇವಾಲಯದಲ್ಲಿ ಸರಳವಾಗಿ ಪೂಜಾ ಪುನಸ್ಕಾರಗಳು ನಡೆದಿವೆ. ಕಲ್ಯಾಣಗಿರಿಯ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಿಕೊಡಲಾಗಿದ್ದು, ಮುಂಜಾನೆ 5 ಗಂಟೆಯಿಂದ ರಾತ್ರಿ 10ರವರೆಗೆ ದರ್ಶನಕ್ಕೆ ಅವಕಾಶವಿದೆ. ದೇವರ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಇನ್ನು ಒಂಟಿಕೊಪ್ಪಲಿನ‌ ವೆಂಕಟರಮಣ ದೇವಸ್ಥಾನ, ಜಯನಗರದಲ್ಲಿರುವ ಇಸ್ಕಾನ್ ದೇವಾಲಯ, ಯೋಗನರಸಿಂಹಸ್ವಾಮಿ ದೇವಾಲಯ ಸೇರಿದಂತೆ ಹಲವು ದೇವಾಲಯಗಳಲ್ಲಿ ವೈಕುಂಠ ಏಕಾದಶಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ABOUT THE AUTHOR

...view details