ಕರ್ನಾಟಕ

karnataka

ETV Bharat / videos

ಆಸ್ಪತ್ರೆಗೆ ದಾಖಲಾದ ಬಿಎಸ್​ವೈ: ಸಿಎಂ ಇನ್ನೂ ಸುಮಾರು ಬ್ಯಾಟಿಂಗ್ ಮಾಡ್ತಾರೆ- ವಿ. ಸೋಮಣ್ಣ - ಸಿಎಂ ಬಿಎಸ್​ ಯಡಿಯೂರಪ್ಪ ಆರೋಗ್ಯ

By

Published : Apr 16, 2021, 2:38 PM IST

ಬೆಂಗಳೂರು: ಕೋವಿಡ್ ಕುರಿತ ಸಭೆ ಮುಗಿಸಿ ಸಿಎಂ ಬಿಎಸ್​ ಯಡಿಯೂರಪ್ಪ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಯಾವ ಚಿಂತೆಯೂ ಬೇಡ, ಸಿಎಂ ಇನ್ನೂ ಸುಮಾರು ಬ್ಯಾಟಿಂಗ್ ಮಾಡ್ತಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಪಾಲಿಕೆ‌ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಸಿಎಂ ನಮಗೂ ಕೆಲಸ ಕೊಡ್ತಾರೆ,‌ ಅವರೂ ಕೆಲಸ ಮಾಡ್ತಾರೆ. ಬಸವಕಲ್ಯಾಣಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಿದ್ದಾಗ ರಾತ್ರಿ ಹನ್ನೊಂದಾದ್ರೂ ಅವರು ಕೆಲಸ ಮಾಡ್ತಿದ್ರು. ಬೆಳಗ್ಗೆ ಆದ್ರೆ ಎದ್ದು ನಡೀತಾರೆ. ಸ್ವಲ್ಪ ಉಪ್ಪಿಟ್ಟು ತಿಂದು ಕೆಲಸ ಮಾಡ್ತಾನೇ ಇರ್ತಿದ್ರು. ಸಿಎಂಗೆ ಹೆಚ್ಚು ಕೆಲಸ ಮಾಡಿ ಆಯಾಸ ಆಗಿದೆ ಅಷ್ಟೇ. ಇನ್ನೂ ಸುಮಾರು ಬ್ಯಾಟಿಂಗ್ ಮಾಡ್ತಾರೆ. ಏನೂ ಚಿಂತೆ ಇಲ್ಲ ಎಂದರು.

ABOUT THE AUTHOR

...view details