ಮತ್ತೆ ಜಲದಿಗ್ಬಂಧನಕ್ಕೆ ಒಳಗಾದ ಜಯತೀರ್ಥರ ಮೂಲವೃಂದಾವನ! - ಮಳಖೇಡ ಜಯತೀರ್ಥ ಮೂಲವೃಂದಾವನ
ಸೇಡಂ(ಕಲಬುರಗಿ): ತಾಲೂಕಿನ ಮಳಖೇಡ ಗ್ರಾಮದ ಜಯತೀರ್ಥರ ಮೂಲವೃಂದಾವನ ಮತ್ತೆ ಜಲದಿಗ್ಬಂಧನಕ್ಕೊಳಗಾಗಿದೆ. ಪಕ್ಕದಲ್ಲೇ ಇರುವ ಕಾಗಿಣಾ ನದಿ ಭೋರ್ಗರೆದು ಹರಿಯುತ್ತಿರುವ ಪರಿಣಾಮ, ಉತ್ತರಾಧಿ ಮಠದಲ್ಲಿ ನೀರು ನುಗ್ಗಿದೆ. ಮಠದ ಜಯತೀರ್ಥರ ಮೂಲವೃಂದಾವನ ಸಂಪೂರ್ಣ ಜಲಾವೃತವಾಗಿದೆ. ಆದರೂ ಸಹ ಆಚಾರ್ಯ ವೆಂಕಣ್ಣಾಚಾರ್ ನೇತೃತ್ವದಲ್ಲಿ ಪೂಜೆ ಮುಂದುವರಿಸಲಾಗಿದೆ. ಮಠದ ಸಿಬ್ಬಂದಿ ನೀರು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ.