ಯಾರು ಏನೇ ಪ್ರಯತ್ನ ಮಾಡಿದರೂ ನನ್ನ ಮತ ಬ್ಯಾಂಕ್ ಒಡೆಯಲು ಸಾಧ್ಯವಿಲ್ಲ: ಯು.ಟಿ ಖಾದರ್ ಅಚಲ ವಿಶ್ವಾಸ - ಯು.ಟಿ ಖಾದರ್ ಚಿಟ್ ಚಾಟ್
ಮಂಗಳೂರಿನಾದ್ಯಂತ ಕಳೆದ ಒಂದು ವಾರದಿಂದ ನಡೆಯುತ್ತಿರುವ ಗಲಭೆ ಹಾಗೂ ಪ್ರಕ್ಷುಬ್ಧ ಪರಿಸ್ಥಿತಿ ನನ್ನನ್ನು ಹೊಣೆಗಾರರನ್ನಾಗಿಸುವ ಬಿಜೆಪಿ ಪ್ರಯತ್ನ ಫಲ ಕೊಡುವುದಿಲ್ಲ. ನಾನು ಏನು ಎನ್ನುವುದು ಕ್ಷೇತ್ರದ ಜನತೆಗೆ ಗೊತ್ತಿದೆ. ನನ್ನನ್ನ ನಂಬಿರುವ ಹಾಗೂ ನಾನು ನಂಬಿರುವ ಜನ ಯಾವತ್ತೂ ನನ್ನ ಕೈಬಿಡುವುದಿಲ್ಲ ಎಂಬ ವಿಶ್ವಾಸ ಇದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಡೆದ ಗಲಭೆಯ ನ್ಯಾಯಾಂಗ ತನಿಖೆ ನಡೆಯಲಿ ಎಂದು ಒತ್ತಾಯಿಸುತ್ತಿದ್ದೇನೆ ಎಂದು ಮಾಜಿ ಸಚಿವ ಹಾಗೂ ಶಾಸಕ ಯು ಟಿ ಖಾದರ್ ಅವರು ಈಟಿವಿ ಭಾರತ್ಗೆ ನೀಡಿದ ಚಿಟ್ ಚಾಟ್ ನಲ್ಲಿ ತಿಳಿಸಿದ್ದಾರೆ.