ಮಗನನ್ನು ಕಂಡು ತುಂಬಾ ಖುಷಿಯಾಯಿತು: ಬಾಲಕನ ತಂದೆ ಬಿಜೋಯ್ - ಕಿಡ್ನಾಪ್ ಆದ ಬಾಲಕನ ತಂದೆ ಬಿಜೋಯ್ ಹೇಳಿಕೆ
ಕೋಲಾರ: ಉಜಿರೆ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದ್ದು, ಬಾಲಕ ಪೋಷಕರ ಮಡಿಲು ಸೇರಿದ್ದಾನೆ. ಮಗನನ್ನು ಕಂಡು ತಂದೆ ಬಿಜೋಯ್ ಸಂತಸಗೊಂಡರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ತುಂಬಾ ಖುಷಿಯಾಗುತ್ತಿದೆ. ಪೊಲೀಸರ ಮತ್ತು ಶಾಸಕರ ಸಹಾಯದಿಂದ ನಮ್ಮ ಮಗ ಸಿಕ್ಕಿದ್ದಾನೆ. ನಮಗೆ ಮತ್ತೆ ಜೀವ ಬಂದಂತಾಗಿದೆ ಎಂದು ಸಂತಸ ಹಂಚಿಕೊಂಡರು.