ಡಿಕೆಶಿ ಆಚಾರ ವಿಚಾರ ಹೇಳುವಷ್ಟು ದೊಡ್ಡವರಾಗಿದ್ದಾರಾ..?: ಟ್ರಬಲ್ ಶೂಟರ್ ವಿರುದ್ಧ ಗುಡುಗಿದ ಕೌರವ - ಹಾವೇರಿ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಟೀಕೆ
ಹಾವೇರಿ: ಡಿ.ಕೆ. ಶಿವಕುಮಾರ್, ಬಿ.ಹೆಚ್.ಬನ್ನಿಕೋಡರಿಗೆ ಆಚಾರ ವಿಚಾರ ಹೇಳುವಷ್ಟು ದೊಡ್ಡವರಾಗಿದ್ದಾರಾ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ. ಜಿಲ್ಲೆಯ ಹಿರೇಕೆರೂರಿನಲ್ಲಿ ಮಾತನಾಡಿದ ಅವರು ಡಿಕೆಶಿ ಕರ್ನಾಟಕದ ಪತಾಕೆಯನ್ನ ತಿಹಾರ ಜೈಲಿನಲ್ಲಿ ಹಾರಿಸಿ ಬಂದವರು. ಅವರ ಬಗ್ಗೆ ನಾನು ಏನು ಹೇಳಲಿ ಎಂದು ಲೇವಡಿ ಮಾಡಿದರು. ಇನ್ನು ಡಿಕೆಶಿ ಯಾವಾಗಲೂ ದರ್ಪದಲ್ಲಿರುತ್ತಾರೆ ಅವರ ಮುಂದೆ ಮಧ್ಯಂತರ ಚುನಾವಣೆಯ ಬಗ್ಗೆ ನಾನು ಅವರ ಜೊತೆ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.