ಉಣ್ಣಕ್ಕಿ ಉತ್ಸವದಲ್ಲಿ ಹರಕೆ ಕಟ್ಟಿಕೊಂಡ್ರೆ ಈಡೇರುತ್ತೆ ನಿಮ್ಮ ಬೇಡಿಕೆ..!
ಪ್ರಕೃತಿಯ ವೈಚಿತ್ರ್ಯವೇ ಹಾಗೆ. ಇಲ್ಲಿನ ಅದೆಷ್ಟೋ ಸತ್ಯಗಳಿಗೆ ಕಾರಣ ಹುಡುಕ ಹೊರಟರೇ ತಿಳಿಯುವುದು ಕಷ್ಟ. ಭೂಗರ್ಭದ ಒಡಲಾಳದಲ್ಲಿ ಅಡಗಿರುವ ಒದೊಂದು ಸತ್ಯ ಅಚ್ಚರಿ ಮೂಡಿಸುತ್ತೆ. ಏಕೆಂದರೇ ಈ ಊರಿನ ಜಾತ್ರೆಯನ್ನು ನೀವು ನೋಡಿದರೇ ಪ್ರಕೃತಿಯ ವಿಸ್ಮಯವನ್ನು ಕಂಡು ಮೂಕವಿಸ್ಮಿತರಾಗ್ತಿರಾ. ಆ ಹುತ್ತಕ್ಕೆ ಸೂರಿಲ್ಲ. ತಡೆ ಗೋಡೆಗಳೂ ಇಲ್ಲ. ಆದರೂ ಮಳೆ-ಗಾಳಿಗೆ ಒಂದಿಂಚು ಕರಗಿಲ್ಲ. ಹುತ್ತದ ಸುತ್ತಲೂ ಕಲ್ಲು-ಸಿಮೆಂಟ್ ಗಳಿಂದಾ ಬಂದೋಬಸ್ತ್ ಮಾಡಿದರೂ ಕೂಡ ದೀಪಾವಳಿ ಅಮಾವಾಸೆ ನಂತರದ ಮಕ್ಕಳ ಹುಣ್ಣಿಮೆಯ ದಿನ ಮಹಾಮಂಗಳಾರತಿ ವೇಳೆ ಇಲ್ಲಿ ನಡೆಯೋ ಉತ್ಸವ ಗಮನ ಸೆಳೆಯುತ್ತೆ...