ಚಿರತೆಗೆ ವಾಹನ ಡಿಕ್ಕಿ; ಗಾಯಾಳು ಚಿರತೆ ನರಳಾಟ - vehicle collides with leopard mysore
ಮೈಸೂರು: ಅಪರಿಚಿತ ವಾಹನ ಚಿರತೆಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಚಾಮುಂಡಿ ಬೆಟ್ಟದಲ್ಲಿ ನಡೆದಿದೆ. ಮಧ್ಯರಾತ್ರಿ ಚಾಮುಂಡಿ ಬೆಟ್ಟದ ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಚಿರತೆಯ ಸೊಂಟ ಮುರಿದಿದೆ. ಬೆಳಗ್ಗೆ ರಸ್ತೆಯಲ್ಲಿ ನರಳುತ್ತಿದ್ದ ಚಿರತೆಯನ್ನು ಜನರು ನೋಡಿ ಅರಣ್ಯ ಇಲಾಖೆಗೆ ತಿಳಿಸಿದರೂ, ಇನ್ನೂ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಆಗಮಿಸಿಲ್ಲ. ಚಿರತೆ ಮೇಲೆ ಏಳಲಾಗದೆ ತೆವಳುತ್ತ ಮರದಡಿ ನರಳುತ್ತಿರುವುದು ಕಂಡುಬಂದಿದೆ.