ಅಂತರಗಂಗೆ ಕಳೆ ಸ್ವಚ್ಛತಾ ಅಭಿಯಾನ.. ಹೆಚ್ಚಿದ ಹುಬ್ಬಳ್ಳಿ ಉಣಕಲ್ ಕೆರೆ ಸೌಂದರ್ಯ! - ಉಣಕಲ್ ಕೆರೆ
ಯುವಕರು ಮನಸು ಮಾಡಿದ್ರೇ ಏನ್ ಬೇಕಾದ್ರೂ ಮಾಡ್ತಾರೆ ಅನ್ನೋದಕ್ಕೆ ಹುಬ್ಬಳ್ಳಿಯ ಉಣಕಲ್ ಕೆರೆಯೇ ಈಗ ಸಾಕ್ಷಿಯಾಗ್ತಿದೆ. ಕೆರೆ ಸುತ್ತಮುತ್ತ ಸುಳಿದಾಡೋದಕ್ಕೆ ಹಿಂದೆ ಮುಂದೆ ನೋಡ್ತಿದ್ದ ಜನರೀಗ ಅಲ್ಲಿನ ಸ್ವಚ್ಛತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸ್ತಿದಾರೆ. ಅದಕ್ಕೆ ಕಾರಣವೇ ಉತ್ಸಾಹಿ ಯುವಕರ ತಂಡ.