ಹುಕ್ಕೇರಿ ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಉಮೇಶ ಕತ್ತಿ ಗರಂ: ಗುತ್ತಿಗೆದಾರನ ಲೈಸೆನ್ಸ್ ರದ್ದತಿಗೆ ಸೂಚನೆ - ಬಿಹಾರ ಮೂಲದ ಗುತ್ತಿಗೆದಾರನ ಲೈಸೆನ್ಸ್ ರದ್ದಿಗೆ ಸೂಚನೆ
ಚಿಕ್ಕೋಡಿ: ಹುಕ್ಕೇರಿ ಬಸ್ ನಿಲ್ದಾಣಕ್ಕೆ ಶಾಸಕ ಉಮೇಶ ಕತ್ತಿ ದಿಢೀರ್ ಭೇಟಿ ನೀಡಿದ್ರು. ಬಸ್ ನಿಲ್ದಾಣದ ಅವ್ಯವಸ್ಥೆ ನೋಡಿ ಗರಂ ಆದ್ರು. ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಅವರು, ಸ್ವಚ್ಛತೆ ಕಾಪಾಡದ ಬಿಹಾರ ಮೂಲದ ಗುತ್ತಿಗೆದಾರನ ಲೈಸೆನ್ಸ್ ರದ್ದು ಮಾಡಲು ಸೂಚಿಸಿದರು. ಸ್ಥಳೀಯರಿಗೆ ಸ್ವಚ್ಛತೆಯ ಗುತ್ತಿಗೆ ನೀಡುವಂತೆ ಶಾಸಕ ಉಮೇಶ ಕತ್ತಿ ಅಧಿಕಾರಿಗಳಿಗೆ ಸೂಚಿಸಿದರು.