ಶ್ರಾವಣ ಮಾಸದ ಕೊನೆಯ ಸೋಮವಾರ: ವಿಜೃಂಭಣೆಯಿಂದ ಜರುಗಿದ ಉಳವಿ ಬಸವೇಶ್ವರ ಜಾತ್ರೆ - Ulavi Basveshwara Car Fst 2019
ಧಾರವಾಡ: ಶ್ರಾವಣ ಮಾಸದ ಕೊನೆಯ ಸೋಮವಾರವಾದ ಹಿನ್ನಲೆಯಲ್ಲಿ ಜಿಲ್ಲೆಯ ಉಳವಿ ಬಸವೇಶ್ವರ ದೇವಸ್ಥಾನದ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಭಕ್ತರೆಲ್ಲ ಸೇರಿ ರಥವನ್ನು ದೇವಸ್ಥಾನದಿಂದ ಉಳವಿ ಬಸವೇಶ್ವರ ವೃತ್ತದವರೆಗೆ ಎಳೆದರು. ಅಡಕೇಶ್ವರ ಮುಡಕೇಶ್ವರ ಉಳವಿ ಚನ್ನಬಸವೇಶ್ವರ ಎಂಬ ಘೋಷ ವಾಕ್ಯಗಳು ಕೇಳಿ ಬಂದವು. ರಥೋತ್ಸವಕ್ಕೆ ಭಕ್ತರು ಉತ್ತತ್ತಿ, ನಿಂಬೆಹಣ್ಣುಗಳನ್ನು ಎಸೆದು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಸಕಲ ವಾದ್ಯಮೇಳಗಳ ಜೊತೆಗೆ ಜಾನಪದ ಶೈಲಿಯ ಮೇಳಗಳು ರಥೋತ್ಸವಕ್ಕೆ ಮೆರುಗು ನೀಡಿದವು.