ಚಿನ್ನದ ಹೂವಿಗೆ ಬಂತು ಭಾರೀ ಸಂಕಷ್ಟ...ಮಳೆಯಿಂದ ಕುಸಿತ ಕಂಡ ಫಸಲು, ಕಂಗಾಲಾದ ರೈತ - ಮಾರುಕಟ್ಟೆ ಕುಸಿತ
ಬಹಳಷ್ಟು ಬೇಡಿಕೆ ಇರೋ ಶಂಕರಪುರ ಮಲ್ಲಿಗೆ ಬೆಳೆಯುವ ಕೃಷಿಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ‘ಚಿನ್ನದ ಹೂವು’ ಎಂದು ಕರೆಯಲ್ಪಡುವ ಶಂಕರಪುರ ಜಾಸ್ಮಿನ್ಗೆ ಮಳೆ ಹೊಡೆತ ಬಿದ್ದಿದೆ. ಮಲ್ಲಿಗೆ ಬೆಳೆ ಕುಸಿತದಿಂದ ಕೃಷಿಕರು ಕಂಗಲಾಗಿದ್ದಾರೆ. ನವರಾತ್ರಿ ಮುನ್ನವೇ ಮಲ್ಲಿಗೆ ಹೂವುವಿನ ಬೆಳೆ ಇಲ್ಲದಾಗಿರುವುದು ರೈತರು ತಲೆ ಮೇಲೆ ಕೈ ಹೊತ್ತು ಕುಳಿತು ಕೊಳ್ಳುವಂತೆ ಮಾಡಿದೆ.