ಕಾಫಿ ನಾಡಲ್ಲಿ ಶೋಭಾ-ಮಧ್ವರಾಜ್ ನಡುವೆ ಫೈಟ್.. ಮತದಾರ ಬರೆಯಲಿದ್ದಾನೆ ಮೈತ್ರಿ ಅಭ್ಯರ್ಥಿ ಹಣೆಬರಹ - pramod madhwaraj
ಕಾಫಿನಾಡು ಉಡುಪಿ-ಚಿಕ್ಕಮಗಳೂರಿನಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ದೋಸ್ತಿ ಸರ್ಕಾರ ಕೈ ಜೋಡಿಸಿದ್ದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ರನ್ನು ಕಣಕ್ಕಿಳಿಸಲಾಗಿದೆ. ಆದರೆ ಕಾಂಗ್ರೆಸ್ಗೆ ಕೈ ಕೊಟ್ಟು ಜೆಡಿಎಸ್ನಿಂದ ಟಿಕೆಟ್ ಪಡೆದಿರುವ ಪ್ರಮೋದ್ಗೆ ಲೋಕಲ್ ಕಾಂಗ್ರೆಸ್ನಿಂದ ಸಂಪೂರ್ಣ ಬೆಂಬಲ ಸಿಕ್ಕಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಒಟ್ಟಾರೆ ಮತದಾರ ಪ್ರಭು ಹಾಲಿ ಸಂಸದೆ ಕೈ ಹಿಡಿಯಲಿದ್ದಾರಾ ಅಥವಾ ಮೈತ್ರಿಗೆ ಜೈ ಅನ್ನಲಿದ್ದಾರ ಎಂದು ಕಾದು ನೋಡಬೇಕಿದೆ.