ಕೃಷ್ಣ ನಗರಿಯಲ್ಲಿ ಚೌತಿಗೆ ರಂಗು ತುಂಬಿದ ಟೈಗರ್ ಡ್ಯಾನ್ಸ್.. - Udupi tiger dance
ಉಡುಪಿ: ಜಿಲ್ಲೆಯಾದ್ಯಂತ ಗಣಪತಿ ಹಬ್ಬ ರಂಗೇರಿದ್ದು, ಕರಾವಳಿಯ ಸಾಂಪ್ರದಾಯಿಕ ಹುಲಿ ಕುಣಿತ, ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಕಳೆ ತುಂಬಿದೆ. ಅಂದ ಹಾಗೆ ಉಡುಪಿಯಲ್ಲಿ ಚೌತಿಗೆ ರಂಗು ತುಂಬೋದೇ ಹುಲಿ ವೇಷಗಳು. ಕೃಷ್ಣನಗರಿಯಲ್ಲಿ ಹುಲಿ ಕುಣಿತ ಕಾಣಸಿಗೋದು ಅಷ್ಟಮಿ ಮತ್ತು ಗಣೇಶ ಚತುರ್ಥಿ ಸಂದರ್ಭದಲ್ಲಿ ಮಾತ್ರ. ಈ ಬಾರಿ ಕೆಳಾರ್ಕಳ ಬೆಟ್ಟುವಿನ ವೀರಮಾರುತಿ ಟೈಗರ್ಸ್ ತಂಡ ಗಣೇಶ ಚತುರ್ಥಿ ಪ್ರಯುಕ್ತ ನಗರದಲ್ಲಿ ಸಂಚರಿಸಿ ತಾಸೆ ಪೆಟ್ಟಿಗೆ ಸಖತ್ ಸ್ಟೆಪ್ ಹಾಕುತ್ತಿದ್ದು, ಕೃಷ್ಣನಗರಿಯ ಮಂದಿಯನ್ನು ಮಂತ್ರ ಮುಗ್ಧರನ್ನಾಗಿಸಿದೆ.