ಸಂಕಷ್ಟದ ಸುಳಿಯಲ್ಲಿ ಕರಾವಳಿ ಮೀನುಗಾರರು... ಅಭಯ ನೀಡಿದ ಬೊಬ್ಬರ್ಯ ದೈವ - ಮೀನುಗಾರರು ಬೊಬ್ಬರ್ಯ ದೈವದ ಮೊರೆ
ಪಶ್ಚಿಮ ಕರಾವಳಿ ತಲ್ಲಣಗೊಂಡಿದೆ.. ಅರಬ್ಬೀ ಸಮುದ್ರದ ನೀರು ಬಿಸಿಯೇರಿದೆ.. ಅಲೆಗಳ ಮೇಲಂಚಿನಲ್ಲಿ ತೇಲಬೇಕಾದ ಮೀನುಗಳು ತಳಮುಟ್ಟಿವೆ.. ಬಲೆಗೆ ಮೀನುಗಳೇ ಸಿಗುತ್ತಿಲ್ಲ.. ಸಮಸ್ಯೆಗಳ ಸುಳಿಯಲ್ಲಿ ಸಿಲಿಕಿರುವ ಮೀನುಗಾರರು ಬೊಬ್ಬರ್ಯ ದೈವದ ಮೊರೆ ಹೋಗಿದ್ದು, ದೈವ ಮೀನು ದೊರಕಿಸಿಕೊಡುವ ಅಭಯ ನೀಡಿದೆ.