ಯುವಕರೊಂದಿಗೆ ಕ್ರಿಕೆಟ್ ಆಡಿದ ಉಡುಪಿ ಜಿಲ್ಲಾಧಿಕಾರಿ - ಕ್ರಿಕೆಟ್ ಆಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್
ಉಡುಪಿ: ಕೆಲಸದ ಒತ್ತಡದ ನಡುವೆಯೂ ಉಡುಪಿ ಜಿಲ್ಲಾಧಿಕಾರಿ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಉಡುಪಿಗೆ ಹೊಸದಾಗಿ ಜಿಲ್ಲಾಸ್ಪತ್ರೆ ಮಂಜೂರಾಗಿದ್ದು, ನೂತನ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ತೆರಳಿದ್ದರು. ಆಸ್ಪತ್ರೆ ನಿರ್ಮಾಣಕ್ಕೆ ನಿಗದಿತವಾದ ಸ್ಥಳದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದರು. ಸ್ಥಳ ಪರಿಶೀಲನೆಯ ಬಳಿಕ ಕೆಲಕಾಲ ಜಿಲ್ಲಾಧಿಕಾರಿ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದರು. ಡಿಸಿ ಬ್ಯಾಟಿಂಗ್ಗೆ ಹುಡುಗರು ಸೇರಿ ಸ್ಥಳದಲ್ಲಿದ್ದವರು ಫಿದಾ ಆದರು.