ಉಡುಪಿ: ಯುವಕರಿಂದ ಭಾರೀ ಗಾತ್ರದ ಹೆಬ್ಬಾವಿನ ರಕ್ಷಣೆ - ಉಡುಪಿ ಹೆಬ್ಬಾವು ರಕ್ಷಣೆ
ಉಡುಪಿ: ತಾಲೂಕಿನ ಬೆಳ್ಳಂಪಳ್ಳಿ ಬಳಿ ಸುಮಾರು 10 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲಾಗಿದೆ. ರಾತ್ರಿಯ ಹೊತ್ತು ಸುನಿಲ್ ಎಂಬಾತ ತಮ್ಮ ಗೆಳೆಯನ ಮನೆಗೆ ಹೋಗುತ್ತಿದ್ದ ವೇಳೆ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ತಕ್ಷಣ ಹಾವು ಹಿಡಿಯಬಲ್ಲ ಪ್ರತೀಕ್ ಮತ್ತು ರಿತಿಕ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿ ಹಾವನ್ನು ಹಿಡಿಯುವಲ್ಲಿ ಈ ಯುವಕರು ಯಶಸ್ವಿಯಾಗಿದ್ದಾರೆ. ರಕ್ಷಿಸಲ್ಪಟ್ಟ ಹಾವನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.