ಚರಂಡಿಯಲ್ಲಿ ಕಲ್ಲಂಗಡಿ ತೊಳೆದು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರ ಬಂಧನ - ಚರಂಡಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನು ತೊಳೆಯುತ್ತಿದ್ದ ಯುವಕರು
ಚಿಕ್ಕೋಡಿ: ಚರಂಡಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನು ತೊಳೆದು ಮಾರಾಟ ಮಾಡುತ್ತಿದ್ದ ವಿಡಿಯೋ ಆಧರಿಸಿ ರಿಹಾನ್ ಆಯಾಜ್ ಮಡ್ಡೆ (19) ಮತ್ತು ಶಾಬಾಜ ಮುನ್ನಾ ಸತಾರಿ (20) ಎಂಬ ಯುವಕರನ್ನು ನಿಪ್ಪಾಣಿ ನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು ನಡೆದ ಘಟನೆ ಆಧರಿಸಿ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ಬೆಳಗಾವಿಯ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.