ಜಂಬೂಸವಾರಿಗೆ ಇನ್ನೆರಡೇ ದಿನ; ಆಕರ್ಷಕ ಸ್ತಬ್ಧಚಿತ್ರಗಳ ತಯಾರಿಕೆಯಲ್ಲಿ ಕಲಾವಿದರು ಮಗ್ನ!
ಮೈಸೂರು: ರಾಜ್ಯದ ವಿವಿಧ ಜಿಲ್ಲೆಗಳ ಸಂಸ್ಕೃತಿ ಹಾಗೂ ನಾಡಿನ ಪರಂಪರೆ ಬಿಂಬಿಸುವ ಸ್ತಬ್ಧಚಿತ್ರಗಳ ತಯಾರಿಕೆಯಲ್ಲಿ ಕಲಾವಿದರು ತೊಡಗಿಸಿಕೊಂಡಿದ್ದು, ಜಂಬೂಸವಾರಿ ಮೆರವಣಿಗೆಯಲ್ಲಿ ಅವರ ಪ್ರತಿಭೆ ಅನಾವರಣಗೊಳ್ಳಲಿದೆ. ವಿಶ್ವವಿಖ್ಯಾತ ಜಂಬುಸವಾರಿ ಮೆರವಣಿಗೆಗೆ ಇನ್ನೆರಡು ದಿನ ಬಾಕಿ ಉಳಿದಿದ್ದು, ಸ್ತಬ್ಧ ಚಿತ್ರಗಳೇ ಇಲ್ಲಿ ಪ್ರಮುಖ ಆಕರ್ಷಣೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಆಕರ್ಷಕ ಸ್ತಬ್ಧಚಿತ್ರಗಳು ತಯಾರಾಗುತ್ತಿವೆ. ಒಟ್ಟು 39 ಸ್ತಬ್ಧಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿವೆ. ಅರಮನೆಯ ಸಾಂಸ್ಕೃತಿಕ ಸಿರಿ, ರಾಜ್ಯದ ಸಂಸ್ಕೃತಿ, ಅಂತರ್ಜಲ, ಅರಣ್ಯೀಕರಣ, ಚಂದ್ರಯಾನ, ಸಂವಿಧಾನ, ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಸ್ತಬ್ಧಚಿತ್ರಗಳ ತಯಾರಿಕೆಯಲ್ಲಿ ಕಲಾವಿದರು ನಿರತರಾಗಿದ್ದಾರೆ.
Last Updated : Oct 5, 2019, 6:14 PM IST