ತೇವದ ಮಣ್ಣಿನಲ್ಲಿ ಮೊಟ್ಟೆಗಳಿಗೆ ಕಾವು ಕೊಡುತ್ತಿರುವ ಹಾವು, ಹಸಿ ಮೊಟ್ಟೆಯಲ್ಲಿ ಮರಿಗಳು ವಿಲ ವಿಲ- ವಿಡಿಯೋ - ತೇವಾಂಶದ ಮಣ್ಣು
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಕಾರಕಿ ಗ್ರಾಮದ ಮಹೇಶ್ ಎಂಬುವವರ ಅಡಿಕೆ ತೋಟದಲ್ಲಿ ಹಾವು ಮೊಟ್ಟೆಗೆ ಕಾವು ಕೊಡುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೊಟ್ಟೆಯಲ್ಲಿ ಹಾವಿನ ಮರಿಗಳು ಒದ್ದಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ಸ್ಥಳೀಯವಾಗಿ ಮಣ್ಣು ಹಾವು ಎಂದು ಕರೆಯುವ ಈ ಉರಗ, ಅಪರೂಪಕ್ಕೆ ಕಾಣ ಸಿಗುತ್ತದೆ. ಈ ಹಾವು ಹೆಚ್ಚಾಗಿ ಮಣ್ಣಿನ ಅಡಿಯಲ್ಲಿಯೇ ಮೊಟ್ಟೆ ಇಡುತ್ತದೆ. ಅಲ್ಲದೆ, ಈ ಅಪರೂಪದ ದೃಶ್ಯ ಕಂಡಿದ್ದು ಮಳೆಯಿಂದಾಗಿ. ಮೊಟ್ಟೆಯಿಟ್ಟ ಸ್ಥಳದಲ್ಲಿ ಮಣ್ಣು ಮುಚ್ಚಿಕೊಂಡಿದ್ದು, ತೇವಾಂಶದ ಮಣ್ಣಿನಲ್ಲಿಯೇ ಮೊಟ್ಟೆಗಳಿಗೆ ಕಾವು ಕೊಡುತ್ತಿದೆ.