ಶಿವಮೊಗ್ಗದಲ್ಲಿ ಎರಡು ದಿನದ ರಾಷ್ಟ್ರೀಯ ಈಜು ಸ್ಪರ್ಧೆ ಪ್ರಾರಂಭ: 200 ಸ್ಪರ್ಧಿಗಳು ಭಾಗಿ - ರಾಷ್ಟ್ರೀಯ ಈಜು ಸ್ಪರ್ಧೆ ಪ್ರಾರಂಭ
ಶಿವಮೊಗ್ಗ: ಇಲ್ಲಿನ ನಿದಿಗೆ ಕೆರೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ 3ನೇ ರಾಷ್ಟ್ರೀಯ ಮಟ್ಟದ ಓಪನ್ ವಾಟರ್ ಸ್ವಿಮಿಂಗ್ ಚಾಂಪಿಯನ್ಶಿಪ್ ಪ್ರಾರಂಭವಾಗಿದೆ. ರಾಜ್ಯ ಸೇರಿದಂತೆ ಅನ್ಯ ರಾಜ್ಯಗಳಿಂದಲೂ 200ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಇಲ್ಲಿ ಬಾಲಕ-ಬಾಲಕಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡವರಿಗೆ ಸುರಕ್ಷತೆಗೆ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿದೆ. ಇಲ್ಲಿ ಆಯ್ಕೆ ಆದವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಿ ಕೊಡಲಾಗುತ್ತದೆ.