ಕರ್ನಾಟಕ

karnataka

ETV Bharat / videos

ನಾಲೆಗೆ ಬಿದ್ದ ಹಸುಗಳು... ಒಂದು ಸಾವು, ಮತ್ತೊಂದನ್ನು ಕಾಪಾಡಿದ ಯುವಕರು..! - ನಾಲೆಗೆ ಬಿದ್ದ ಹಸುಗಳು

By

Published : Aug 25, 2020, 5:38 PM IST

ಚಾಮರಾಜನಗರ: ಕಬಿನಿ ನಾಲೆಗೆ ಎರಡು ಹಸುಗಳಲ್ಲಿ ಒಂದನ್ನು ರಕ್ಷಿಸುವಲ್ಲಿ ಯುವಕರು ಯಶಸ್ವಿಯಾಗಿರುವ ಘಟನೆ ಸಂತೇಮರಹಳ್ಳಿ ಸಮೀಪದ ಬಸವಟ್ಟಿ ಗ್ರಾಮದಲ್ಲಿ ನಡೆದಿದೆ. ಬಸವಟ್ಟಿ ಗ್ರಾಮದ ರೈತರೊಬ್ಬರ ಹಸುಗಳು ಮೇಯುವಾಗ ನಾಲೆಗೆ ಬಿದ್ದು ಒದ್ದಾಡುತ್ತಿದ್ದುದನ್ನು ಗಮನಿಸಿದ ಯುವಕರು ಹಸುಗಳನ್ನು ದಡಕ್ಕೆ ಎಳೆದು ತಂದಿದ್ದಾರೆ. ಎರಡರಲ್ಲಿ ಒಂದು ಮಾತ್ರ ಬದುಕುಳಿದಿದ್ದು, ಮತ್ತೊಂದು ನಾಲೆಗೆ ಬಿದ್ದ ರಭಸಕ್ಕೆ ಸಾವನ್ನಪ್ಪಿದೆ. ಮೃತಪಟ್ಟ ಹಸುವಿನ ಮಾಲೀಕರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

ABOUT THE AUTHOR

...view details