ಬ್ರಿಟನ್ನಿಂದ ಚಿಕ್ಕಮಗಳೂರಿಗೆ ಬಂದ ಇಬ್ಬರಲ್ಲಿ ಕೊರೊನಾ ದೃಢ: ಡಿಸಿ ಮಾಹಿತಿ - ಜಿಲ್ಲಾಧಿಕಾರಿ ಬಗಾದಿ ಗೌತಮ್
ಚಿಕ್ಕಮಗಳೂರು: ಬ್ರಿಟನ್ನಿಂದ ಈವರೆಗೆ ಚಿಕ್ಕಮಗಳೂರು ಜಿಲ್ಲೆಗೆ 18 ಮಂದಿ ಆಗಮಿಸಿದ್ದು, ಇದರಲ್ಲಿ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ. ಇಬ್ಬರಿಗೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ 16 ಜನರ ವರದಿ ನೆಗೆಟಿವ್ ಬಂದಿದೆ ಎಂದು ಡಿಸಿ ಬಗಾದಿ ಗೌತಮ್ ತಿಳಿಸಿದ್ದಾರೆ. ಅಲ್ಲದೆ ಪಾಸಿಟಿವ್ ಬಂದವರ ಮನೆಯವರ ಮೇಲೂ ನಿಗಾ ವಹಿಸಿರುವುದಾಗಿ ತಿಳಿಸಿದ್ದಾರೆ.