ಚನ್ನಗಿರಿಯಲ್ಲಿ ಜನರಿಗೆ ಬೆದರಿಕೆ ಹಾಕುತ್ತಿದ್ದ ಇಬ್ಬರ ಬಂಧನ, ಐವರು ಪರಾರಿ - ಚನ್ನಗಿರಿಯಲ್ಲಿ ಜನರಿಗೆ ಬೆದರಿಕೆ ಹಾಕುತ್ತಿದ್ದ ಇಬ್ಬರ ಬಂಧನ ಸುದ್ದಿ
🎬 Watch Now: Feature Video
ದಾವಣಗೆರೆ: ಚನ್ನಗಿರಿ ಪಟ್ಟಣದ ಎಪಿಎಂಸಿ ಆವರಣದ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಶಕೀಲ್ ಹಾಗೂ ಶಾಹೀದ್ ಎಂಬ ಕಿಡಿಗೇಡಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರೆಂದು ಹೇಳಿಕೊಂಡು ರಸ್ತೆಯಲ್ಲಿ ಹೋಗಿಬರುವ ಜನರಿಗೆ ಏಳು ಮಂದಿ ಕಿಡಿಗೇಡಿಗಳು ಬೆದರಿಕೆ ಹಾಕುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ಇಬ್ಬರು ಯುವಕರು ಸಿಕ್ಕಿದ್ದು, ಉಳಿದ ಐವರು ಆರೋಪಿಗಳು ಪರಾರಿಯಾಗಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.