ಟಿವಿಸ್ ಐ ಕ್ಯೂಬ್ ಬಿಡುಗಡೆ : 1.15 ಲಕ್ಷಕ್ಕೆ ಸಿಗಲಿದೆ ವಿದ್ಯುತ್ ಚಾಲಿತ ವಾಹನ - TV's I Cube
ಟಿವಿಎಸ್ ಸಂಸ್ಥೆ ವಿದ್ಯುತ್ ಚಾಲಿತ ವಾಹನೋದ್ಯಮಕ್ಕೂ ಕಾಲಿಟ್ಟಿದ್ದು, 1.15 ಲಕ್ಷ ರೂಪಾಯಿಗೆ ಐ ಕ್ಯೂಬ್ ಎಂಬ ವಿದ್ಯುತ್ ಚಾಲಿತ ವಾಹನ ಬಿಡುಗಡೆಯಾಗಿದೆ. ಬ್ಯಾಟರಿ ಚಾರ್ಜ್ ಆಗುವುದಕ್ಕೆ 4 ಗಂಟೆ ತಗುಲಲಿದ್ದು, ಒಂದು ಪೂರ್ಣ ಚಾರ್ಜ್ನಲ್ಲಿ 75 ಕಿಲೋಮೀಟರ್ ಚಲಿಸುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಸದ್ಯ ಬೆಂಗಳೂರಿನಲ್ಲಿ ಮಾತ್ರ ವಾಹನವನ್ನು ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ಬಿಡುಗಡೆ ಮಾಡಲಾಗುವುದು ಎಂದು ಟಿವಿಎಸ್ ಸಂಸ್ಥೆಯ ಸಹ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ತಿಳಿಸಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನೀಡಿದ ಮಾಹಿತಿ ಇಲ್ಲಿದೆ.