ಮಹಾಮಳೆಗೆ ತುಂಬಿ ಹರಿಯುತ್ತಿರುವ ತುಂಗಭದ್ರಾ... ನದಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ - ತುಂಗಾಭದ್ರಾ ನದಿ
ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಹಾದು ಹೋಗುವ ತುಂಗಭದ್ರಾ ನದಿ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಇಲ್ಲಿನ ರೈಲ್ವೆ ಸೇತುವೆ ಸಮೀಪಕ್ಕೆ ನದಿ ನೀರು ಬಂದಿದ್ದು, ಇಲ್ಲಿ ಸಂಚರಿಸುವ ರೈಲುಗಳು ನೀರಿನ ಮೇಲೆ ಹೋದಂತೆ ಭಾಸವಾಗುತ್ತಿದೆ. ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ ನೋಡಲು ಹರಿಹರ ಮಾತ್ರವಲ್ಲದೇ ದಾವಣಗೆರೆಯಿಂದಲೂ ಸಾರ್ವಜನಿಕರು ಬಂದು ದೃಶ್ಯವನ್ನು ಕಣ್ತುಂಬಿಕೊಂಡು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಸದ್ಯ ತುಂಗಭದ್ರಾ ನದಿಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.