ಭರದಿಂದ ಸಾಗಿದೆ ತುಂಗಭದ್ರಾ ನಾಲಾ ಗೇಟ್ ರಿಪೇರಿ - ತುಂಗಭದ್ರಾ ಜಲಾಶಯದ ಎಡದಂಡೆ ನಾಲೆ
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಯ ಮೇಲ್ಮಟ್ಟದ ಕಾಲುವೆಯ ಗೇಟ್ನ ಪ್ಲೇಟ್ ಕಿತ್ತು ಹೋಗಿದ್ದು, ರಿಪೇರಿ ಕೆಲಸ ಭರದಿಂದ ನಡೆದಿದೆ. ಸುಮಾರು 35 ಕ್ಯೂಸೆಕ್ ಸಾಮರ್ಥ್ಯದ ಈ ಮೇಲ್ಮಟ್ಟದ ಕಾಲುವೆಯ ಗೇಟ್ನ ಪ್ಲೇಟ್ ಕಿತ್ತು ಹೋಗಿದ್ದರಿಂದ ಪಂಪಾವನಕ್ಕೆ ನೀರು ನುಗ್ಗಿದೆ. ಅಲ್ಲದೆ ಮುನಿರಾಬಾದ್ ಗ್ರಾಮದ ತಗ್ಗು ಪ್ರದೇಶಕ್ಕೆ ನೀರು ಹರಿದಿದೆ. ಕಾಲುವೆಯ ಗೇಟ್ ಕಿತ್ತು ಹೋಗಿರುವುದರಿಂದ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ನೀರಿಲ್ಲದ ಸಂದರ್ಭದಲ್ಲಿ ಸರಿಯಾಗಿ ನಿರ್ವಹಣೆ ಮಾಡದೆ ಇರೋದು ಈ ಸಮಸ್ಯೆಗೆ ಕಾರಣ ಎನ್ನಲಾಗ್ತಿದೆ.
Last Updated : Aug 13, 2019, 3:14 PM IST