ಕಿತ್ತು ಹೋಯ್ತು ತುಂಗಭದ್ರಾ ಜಲಾಶಯದ ಕಾಲುವೆ ಗೇಟ್: ಮುನಿರಾಬಾದ್ನಲ್ಲಿ ಪ್ರವಾಹ ಪರಿಸ್ಥಿತಿ - ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್
ಕೊಪ್ಪಳ ತಾಲೂಕಿನ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್ ಕಿತ್ತು ಹೋಗಿದ್ದು, ಹಲವು ಕಡೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ನಿನ್ನೆಯಿಂದ ಗೇಟ್ ರಿಪೇರಿ ಕೆಲಸ ನಡೆಯುತ್ತಿದ್ದು, ಇನ್ನೂ ಸರಿಯಾಗಿಲ್ಲ. ಹೀಗಾಗಿ ಕಾಲುವೆಯ ಸಾಮರ್ಥ್ಯ ಮೀರಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಮುನಿರಾಬಾದ್ನ ಅನೇಕ ಪ್ರದೇಶಗಳಲ್ಲಿರುವ ಸುಮಾರು 100 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರೋದ್ರಿಂದ ಜನರು ಕಂಗಾಲಾಗಿದ್ದಾರೆ. ಅಲ್ಲಿನ ವಾಸ್ತವ ಪರಿಸ್ಥಿತಿ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ..