ತುಂಗಾ ಮೇಲ್ದಂಡೆ ಯೋಜನೆ: ರೈತರಿಂದ ಹಣ ಲೂಟಿ ಆರೋಪ - accused of looting money
ಹಾವೇರಿ: ಜಿಲ್ಲೆಯ ರೈತರ ಜೀವನಾಡಿ ತುಂಗಾ ಮೇಲ್ದಂಡೆ ಯೋಜನೆ, ಸಹಸ್ರಾರು ರೈತರಿಗೆ ವರದಾನವಾಗಿಬೇಕಿದ್ದ ಯೋಜನೆ. ಆದ್ರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಾಪವಾಗಿ ಪರಿಣಮಿಸಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಯುಟಿಪಿ ಕಾಲುವೆಯಲ್ಲಿ ಮಳೆಗಾಲದಲ್ಲಿ ನೀರು ಸಾರಾಗವಾಗಿ ಹರಿಯಲಿ ಎಂದು ಪ್ರತಿವರ್ಷ ಕಾಲುವೆ ಬೇಸಿಗೆಯಲ್ಲಿ ಸ್ವಚ್ಛಗೊಳಿಸಲಾಗುತ್ತದೆ. ಕಾಲುವೆಯಲ್ಲಿ ಬೆಳೆದ ಗಿಡಗಂಟಿಗಳು ಮುಳ್ಳು ಕಂಟಿಗಳನ್ನು ತೆಗೆಯಲಾಗುತ್ತದೆ. ಆದರೆ, ಅಧಿಕಾರಿಗಳು ತೋರಿಕೆಗೆ ಕೆಲಸ ಮಾಡಿ ಹಣ ಲೂಟಿ ಹೊಡೆಯುತ್ತಿದ್ದಾರೆ. ಇದರಿಂದಾಗಿ ಕಾಲುವೆ ಒಡೆದು ರೈತರ ಜಮೀನಿನಲ್ಲಿರುವ ಫಸಲು ಹಾಳಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.