ತುಂಬಿದ ತುಂಗೆಯಿಂದ 6 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ - tunga dam water release walkthrough
ಶಿವಮೊಗ್ಗದ ತುಂಗಾ ಅಣೆಕಟ್ಟು ಮುಂಗಾರಿನ ಆರಂಭದಲ್ಲಿಯೇ ಭರ್ತಿಯಾಗಿದೆ. ಹೀಗಾಗಿ, ಇಂದು ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಯಿತು. ಇದ್ರ ಜೊತೆಗೆ, ವಿದ್ಯುತ್ ಉತ್ಪಾದನೆಗೆ 4 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ನಾಲ್ಕು ಕ್ರಸ್ಟ್ ಗೇಟ್ಗಳನ್ನು ಒಂದು ಅಡಿ ಎತ್ತರಿಸಿ ಪ್ರತಿ ಗೇಟ್‌ನಿಂದ 500 ಕ್ಯೂಸೆಕ್ನಂತೆ ಎರಡು ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಈ ಕುರಿತು ಈಟಿವಿ ಭಾರತದ ಶಿವಮೊಗ್ಗ ಪ್ರತಿನಿಧಿ ಕಳುಹಿಸಿದ ಪ್ರತ್ಯಕ್ಷ ವರದಿ ಇಲ್ಲಿದೆ.